Sunday, March 14, 2010

ಯುಗಾದಿ - ಹೊಸ ಚೇತನದ ಹೋರಾಟದ ಹಾದಿ

ಮತ್ತೆ ಬಂದಿದೆ ಉಗಾದಿ
ಹೊಸ ಸಂವತ್ಸರದ ಉಗಮದೊಂದಿಗೆ
ಬಳಲಿ ಬೆಂಡಾಗಿ, ನಲುಗಿ ನಡುಗಿರುವ
ಜೀವಸಂಕುಲಕ್ಕೆ ತಂದಿದೆ ಸಂದೇಶವ
ಹೊಸತನದಿ, ಹೊಸ ಚೇತನದಿ
ನಡೆಯಲಿ ಈ ಸಂವತ್ಸರದ ಆದಿ

ಉಗಾದಿಯ ಸಂದೇಶ ಅರಿತವ
ಬರಡಾದ ನೆಲವ ಹೊಸ ಬೇಸಾಯದಿ
ಹದಮಾಡ ಹೊರಟಿರುವ
ಹದಮಾಡಿದ ಭೂಮಿಗೆ ಅಮೃತ ಸಿಂಚನವಾಗಿ
ನೆಂದ ನೆಲದಲಿ ಬೀಜ ಬಿತ್ತಿ
ಸೃಷ್ಟಿ ಕಾರ್ಯಕ್ಕೆ ತನ್ನ ಪುರುಷ ಪ್ರಯತ್ನ ನೆಡಸಿರುವ

ಕಾಲಗರ್ಭದಲ್ಲೇನಡಗಿದೆಯೋ ?
ಯುಗ ಯುಗಾಂತರದೀ ಪುರುಷ ಪ್ರಯತ್ನಕ್ಕೆ
ಬಸಿರಾದದೆಷ್ಟೋ ? ಹಸಿರಾದದೆಷ್ಟೋ ?
ಬದುಕಿನ ಈ ಹೋರಾಟದ ಹಾದಿಯಲಿ
ಬೇಸತ್ತಿರುವ ಜೀವಸಂಕುಲಕ್ಕೆ
ಹೊಸತನದ ಸಂದೇಶವ , ಹೊಸಚೇತನವ
ಯುಗಯುಗಗಳಿಂದ ಮತ್ತೆ ಮತ್ತೆ ತಂದಿದೆ ಈ ಉಗಾದಿ ... ಯುಗಾದಿ...

7 comments:

Dr.D.T.Krishna Murthy. said...

ಹೊಸ ಯುಗ ,ಹೊಸ ಆದಿ .ಹೊಸ ಹಾದಿಯಲ್ಲಿ ಹೊಸದೊಂದು ಕವನ!ಕವನಗಳು ಚೈತ್ರದ ಚಿಗುರಾಗಿ ,ಹೆಮ್ಮರವಾಗಿ ಬೆಳೆಯಲಿ .ಓದುವವರಿಗೆ ತಂಪನ್ನು ನೀಡುವ ತಳಿರಾಗಲಿ.

ಮನದಾಳದಿಂದ............ said...

ಹೊಸವರುಷಕೆ, ಹೊಸತನವ ಸಾರುವ, ಹೊಸ ಕವನ! ಸುಂದರ ಕವನ
ಉಗಾದಿಯ ಶುಭಾಶಯಗಳು.

Ranjita said...

ಚಂದದ ಕವನ
ಯುಗಾದಿಯ ಶುಭಾಷಯಗಳು ಸರ್

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

good one. happy ugaadi.

H S ASHOK KUMAR said...

thank u DTK sir
nanna prayathna saguthide.

thank u praveen
thamagu happy ugadi

ranjitha thank u
happy ugadi to u too
where are u no updates?
saagali payana

thank u kuusu muliyala.
happy ugai to u

ದೀಪಸ್ಮಿತಾ said...

ತಡವಾಗಿ ಬಂದಿದ್ದೇನೆ. ಯುಗಾದಿ ಅನೇಕ ಕೃತಿಗಳಿಗೆ ಸ್ಫೂರ್ತಿಯಾಗಿದೆ, ದರಾ ಬೇಂದ್ರೆಯಿಂದ ಹಿಡಿದು. ಚೆನ್ನಾಗಿದೆ

Raghu said...

ಸರ್,
ಕವಿತೆ ಚೆನ್ನಾಗಿದೆ...ವಿಶೇಷವಾಗಿ ಎರಡನೇ ಬ್ಲಾಕ್
ನಿಮ್ಮವ,
ರಾಘು.