Friday, May 14, 2010

ಮಿರ್ಜಾ ಅಸಾದುಲ್ಲಾ ಖಾನ್ ಗಾಲಿಬ್ ( ಮಿರ್ಜಾ ಗಾಲಿಬ್) ರವರ ಒಂದೆರಡು ಗಜಲಗಳು

೧.ಉಮ್ರ-ಎ-ದರಾಜ್ ಮಾಂಗಕರ್ ಲಾಯೇ ಥೆ ಚಾರ್ ದಿನ್
ದೋ ಅರಜೂ ಮೇ ಕಟಗಯೇ ದೋ ಇಂತಜಾರ ಮೇ

(ದೀರ್ಘಾಯುಷ್ಯವ ಬೇಡಿ, ಪಡೆದೆ ನಾಲ್ಕು ದಿನಗಳ

ಕಳೆದೆ ಎರಡು ದಿನ ಆಸೆಯಲಿ, ಎರಡು ಕಾಯುವಿಕೆಯಲಿ )


೨.ಯಹ್ ನ ಥಿ ಹಮಾರಿ ಕಿಸ್ಮತ್ ಜೋ ವಿಸಾಲ-ಎ-ಯಾರ ಹೋತಾ
ಅಗರ್ ಔರ್ ಜೀತ ರಹತೆ, ಯಹಿ ಇಂತಜಾರ್ ಹೋತಾ
ತೆರೆ ವಾದೆ ಪರ್ ಜಿಯೆ ಹಮ್, ತೋ ಯೇ ಜಾನ್, ಝೂಟ್ ಜಾನಾ
ಕೆ ಖುಷಿ ಸೆ ಮರ್ ನ ಜಾತೆ ಅಗರ್ ಎತಬಾರ್ ಹೋತಾ

(ಪ್ರೆಯಸಿಯನ್ನು ಭೇಟಿಯಾಗುವ ಸೌಭಾಗ್ಯ ನನ್ನದಾಗಲಿಲ್ಲ.
ಆ ಕ್ಷಣಕ್ಕಾಗಿ ಹಂಬಲಿಸುತ್ತಲೇ ಇರುತ್ತಿದ್ದೆ, ಉಸಿರು ನಿಂತಿರದಿದ್ದಲ್ಲಿ ,
ನಿನ್ನ ಮಾತುಗಳು ನಿಜವಲ್ಲ ಎಂದು ನನಗೆ ತಿಳಿದಿತ್ತು ,
ಆದರೂ ಸಂತೋಷದಿಂದ ಸಾಯುತ್ತಿರಲಿಲ್ಲ ನಾ ಅದನ್ನು ನಂಬದೆ ಹೋಗಿದ್ದಲ್ಲಿ )


೩. ಶಬ್ ಕೊ ಕಿಸೀ ಕೆ ಖ್ವಾಬ್ ಮೆ ಆಯಾ ನ ಹೋ ಕಹೀಂ
ದುಖತೆ ಹೈ ಆಜ್ ಉಸ್ ಬುತ್-ಎ-ನಾಜುಕ್ ಬದನ್ ಕೆ ಪಾಂವ್

( ಆ ಚೆಲುವೆಯ ಕಾಲು ನೋಯುತ್ತಿದೆಯ೦ತೆ ಇಂದು ರಾತ್ರಿ ತುಸು
ಹೆಚ್ಚೇ ಓಡಾಡಿರಬೇಕು,ಯಾರದೋ ಕನಸಿನಲಿ )


೪. ಜಿ ಡೂಂಡತಾ ಹೈ ಫಿರ್ ವಹಿ ಪುರ್ಸತ್ ಕೆ ರಾತ್ ದಿನ್
ಬೈಟೆ ರಹೇ ತಸವ್ವುರ್-ಎ-ಜಾನಾ ಕಿಯೆ ಹುವೆ

(ಹಗಲು ರಾತ್ರಿಯನ್ನದೆ ನನ್ನ ಪ್ರೇಯಸಿಯ ವಿಚಾರದಲಿ ಮೈ ಮರೆತಿರುವಾಗ
ಆ ಚಿಂತೆಯಿಂದ ಬಿಡುಗಡೆ ಹೊಂದಲು ಹಾತೊರೆಯುತ್ತಿದೆ ಮನಸು)


Sunday, March 14, 2010

ಯುಗಾದಿ - ಹೊಸ ಚೇತನದ ಹೋರಾಟದ ಹಾದಿ

ಮತ್ತೆ ಬಂದಿದೆ ಉಗಾದಿ
ಹೊಸ ಸಂವತ್ಸರದ ಉಗಮದೊಂದಿಗೆ
ಬಳಲಿ ಬೆಂಡಾಗಿ, ನಲುಗಿ ನಡುಗಿರುವ
ಜೀವಸಂಕುಲಕ್ಕೆ ತಂದಿದೆ ಸಂದೇಶವ
ಹೊಸತನದಿ, ಹೊಸ ಚೇತನದಿ
ನಡೆಯಲಿ ಈ ಸಂವತ್ಸರದ ಆದಿ

ಉಗಾದಿಯ ಸಂದೇಶ ಅರಿತವ
ಬರಡಾದ ನೆಲವ ಹೊಸ ಬೇಸಾಯದಿ
ಹದಮಾಡ ಹೊರಟಿರುವ
ಹದಮಾಡಿದ ಭೂಮಿಗೆ ಅಮೃತ ಸಿಂಚನವಾಗಿ
ನೆಂದ ನೆಲದಲಿ ಬೀಜ ಬಿತ್ತಿ
ಸೃಷ್ಟಿ ಕಾರ್ಯಕ್ಕೆ ತನ್ನ ಪುರುಷ ಪ್ರಯತ್ನ ನೆಡಸಿರುವ

ಕಾಲಗರ್ಭದಲ್ಲೇನಡಗಿದೆಯೋ ?
ಯುಗ ಯುಗಾಂತರದೀ ಪುರುಷ ಪ್ರಯತ್ನಕ್ಕೆ
ಬಸಿರಾದದೆಷ್ಟೋ ? ಹಸಿರಾದದೆಷ್ಟೋ ?
ಬದುಕಿನ ಈ ಹೋರಾಟದ ಹಾದಿಯಲಿ
ಬೇಸತ್ತಿರುವ ಜೀವಸಂಕುಲಕ್ಕೆ
ಹೊಸತನದ ಸಂದೇಶವ , ಹೊಸಚೇತನವ
ಯುಗಯುಗಗಳಿಂದ ಮತ್ತೆ ಮತ್ತೆ ತಂದಿದೆ ಈ ಉಗಾದಿ ... ಯುಗಾದಿ...

Tuesday, February 9, 2010

ಕಾಯುತಿರುವ ಕರುಣಾಮಯಿ

ಹುಚ್ಚು ಮನಸ್ಸು ಹುಡುಕುತಿದೆ
ವಿವಿಧ ನೆಲೆ, ಕಲೆ, ಆನಂದ, ಸ್ಪೂರ್ತಿಯ ಸೆಲೆ
ಹತ್ತು ಹಲವು ಆಸೆಗಳ ಬಲೆಯಲ್ಲಿ ಸಿಕ್ಕು
ಸೋತು ಸೊರಗಿ ಮೆತ್ತಗಾಗಿ
ಮರುಗುತಿದೆ ಏನಿದು ವಿಧಿ ಲೀಲೆ

ಅಯ್ಯೋ ಪಾಪಚ್ಚಿ ಮನಸ್ಸು! ಅದಕ್ಕೇನು ತಿಳಿದಿದೆ?

ಅದರ ಹಿಂದೆ ಒಂದು ಭೂತ ಬುದ್ಧಿ
ಭವಿಷ್ಯದ ಭ್ರಮೆಯ ಆಟವಾಡುತಿದೆ
ಆಸೆಯ ಆನಂದವೆಂಬ ಮರೀಚಿಕೆಯ ಬೆನ್ನು ಹತ್ತಿಸಿದೆ
ತನ್ನನ್ನು ತಾನರಿಯದೆ ಅಹಂಕಾರದಲಿ ಮುಳುಗಿದೆ

ಪಾಪದ ಮನಸ್ಸುನು ದಾರಿತಪ್ಪಿಸುತ್ತಾ ತಾನು ತನ್ನ ನೆಲೆಯ ಮರೆತಿದೆ

ಬುದ್ದಿಯ ಅಹಂಕಾರವ ನೋಡುತ್ತಾ
ಬ್ರಹ್ಮವ ತಿಳಿದಿರುವ ಒಳಗೊಬ್ಬ ಕುಳಿತಿರುವ
ಸೋತು ಸೊರಗಿರುವ ಮನಸ್ಸಿಗೆ ಸ್ಪೂರ್ತಿಯ
ಗುಪ್ತಗಾಮಿನಿಯ ಹರಿಸುತ್ತಿರುವ
ಏಳು, ಎದ್ದೇಳು ನನ್ನಡೆಗೆ ಮುಖಮಾಡು
ಬುದ್ದನಂತೆ ಬದ್ಧನಾಗು ಎನುತಿರುವ
ಆನಂದದ ಅನಂತತೆಯ ಭವ್ಯ ಉಡುಗೊರೆಯೊಂದಿಗೆ
ಕಾಯುತಿರುವ, ಕಾಯುತಿರುವ, ಕಾಯುತಿರುವ ....


Monday, February 8, 2010

ಕಾಲದ ಹಾರೈಕೆ

ಹಳತು ಹರಿಯಲಿ ಹೊಸತು ಹೊಮ್ಮಲಿ
ಜೀವ ಭಾವಗಳು ಉಕ್ಕಲಿ
ನೆನಪು ನಲಿಯಲಿ ಭರವಸೆ ಬಲಿಯಲಿ
ನಲಿವು ನೋವನು ನುಂಗಲಿ
ಹೊರಟ ಕಾಲವು ನಗುತ ಹೇಳಿದೆ
ನನ್ನ ಕಾಲವು ನೆನಪಿರಲಿ
ನೀವು ಕಂಡ ಕನಸುಗಳೆಲ್ಲವೂ
ಬರುವ ಕಾಲದಿ ನನಸಾಗಲಿ