Tuesday, February 9, 2010

ಕಾಯುತಿರುವ ಕರುಣಾಮಯಿ

ಹುಚ್ಚು ಮನಸ್ಸು ಹುಡುಕುತಿದೆ
ವಿವಿಧ ನೆಲೆ, ಕಲೆ, ಆನಂದ, ಸ್ಪೂರ್ತಿಯ ಸೆಲೆ
ಹತ್ತು ಹಲವು ಆಸೆಗಳ ಬಲೆಯಲ್ಲಿ ಸಿಕ್ಕು
ಸೋತು ಸೊರಗಿ ಮೆತ್ತಗಾಗಿ
ಮರುಗುತಿದೆ ಏನಿದು ವಿಧಿ ಲೀಲೆ

ಅಯ್ಯೋ ಪಾಪಚ್ಚಿ ಮನಸ್ಸು! ಅದಕ್ಕೇನು ತಿಳಿದಿದೆ?

ಅದರ ಹಿಂದೆ ಒಂದು ಭೂತ ಬುದ್ಧಿ
ಭವಿಷ್ಯದ ಭ್ರಮೆಯ ಆಟವಾಡುತಿದೆ
ಆಸೆಯ ಆನಂದವೆಂಬ ಮರೀಚಿಕೆಯ ಬೆನ್ನು ಹತ್ತಿಸಿದೆ
ತನ್ನನ್ನು ತಾನರಿಯದೆ ಅಹಂಕಾರದಲಿ ಮುಳುಗಿದೆ

ಪಾಪದ ಮನಸ್ಸುನು ದಾರಿತಪ್ಪಿಸುತ್ತಾ ತಾನು ತನ್ನ ನೆಲೆಯ ಮರೆತಿದೆ

ಬುದ್ದಿಯ ಅಹಂಕಾರವ ನೋಡುತ್ತಾ
ಬ್ರಹ್ಮವ ತಿಳಿದಿರುವ ಒಳಗೊಬ್ಬ ಕುಳಿತಿರುವ
ಸೋತು ಸೊರಗಿರುವ ಮನಸ್ಸಿಗೆ ಸ್ಪೂರ್ತಿಯ
ಗುಪ್ತಗಾಮಿನಿಯ ಹರಿಸುತ್ತಿರುವ
ಏಳು, ಎದ್ದೇಳು ನನ್ನಡೆಗೆ ಮುಖಮಾಡು
ಬುದ್ದನಂತೆ ಬದ್ಧನಾಗು ಎನುತಿರುವ
ಆನಂದದ ಅನಂತತೆಯ ಭವ್ಯ ಉಡುಗೊರೆಯೊಂದಿಗೆ
ಕಾಯುತಿರುವ, ಕಾಯುತಿರುವ, ಕಾಯುತಿರುವ ....


14 comments:

Dr.D.T.Krishna Murthy. said...

Buddhahood is a state to know Brahmha with in which is same as Brahmha without.TO reach Buddhahood the Buddhi has to become prabuddha.DR.D.T.K.

ಮನಸಿನಮನೆಯವನು said...

'H S ASHOK KUMAR ' ಅವ್ರೆ..,

ಚೆನ್ನಾಗಿದೆ..

Blog is Updated:http://manasinamane.blogspot.com

ಮನದಾಳದಿಂದ............ said...

ಅಶೋಕ್ ಅವರೇ, ಮನಸ್ಸಿನ ಚಂಚಲ ಬುದ್ಧಿಯನ್ನು ಚನ್ನಾಗಿ ವರ್ಣಿಸಿದ್ದೀರ. keep writing..........

H S ASHOK KUMAR said...

thank u dtk murthy avare

H S ASHOK KUMAR said...

thank u guru avare

H S ASHOK KUMAR said...

thank u praveen for u r kind comment

Narayan Bhat said...

ಮನಸು v/s ಬುದ್ಧಿ ....ಕವನ ಚೆನ್ನಾಗಿದೆ.

H S ASHOK KUMAR said...

thank u narayan sir

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಕಾಯುತಿರುವ, ಕಾಯುತಿರುವ, ಕಾಯುತಿರುವ ....,
ಮನಸನು ಸ್ಥಿರಗೊಳಿಸು,
ಆನ೦ದವನುಭವಿಸು
ಅದೇ ಜೀವನ ಪ್ರೀತಿ,
ಅದೇ ಜೀವನ ಪೂರ್ತಿ.
ಚೆನ್ನಾಗಿದೆ ಕವನ.,ಸಾಗಲಿ ಪಯಣ

H S ASHOK KUMAR said...

thank u
kuusu muliyala avare
thamma hesaru iddare channayettu

ಚುಕ್ಕಿಚಿತ್ತಾರ said...

ಬುದ್ದಿಯ ಅಹಂಕಾರವ ನೋಡುತ್ತಾ
ಬ್ರಹ್ಮವ ತಿಳಿದಿರುವ ಒಳಗೊಬ್ಬ ಕುಳಿತಿರುವ
ಸೋತು ಸೊರಗಿರುವ ಮನಸ್ಸಿಗೆ ಸ್ಪೂರ್ತಿಯ
ಗುಪ್ತಗಾಮಿನಿಯ ಹರಿಸುತ್ತಿರುವ
nice lines...

H S ASHOK KUMAR said...

thank u
chukki chittara avare
thamma hesaru thilisidare chennagittu?

dkpdos said...

hi it is comment check from jagga

dkpdos said...

Buddi, Buddha ,bodhisatva ivellla namage arthavagada vishayagalu guruve . manushyana sneha,preethi, kaalaji ,sannathana ,swartha ivugale nammannu kaaduvudu. namage e kshanada baduku mukhya .adara jeevana dhravya mukhya . Bhahubaliyaaguva thavaka namagilla .Bharathesha chakravarthiya vaibhava ....atleast dinnadamattigaadaru

nimma kavana chennagide
keep writing