Sunday, March 14, 2010

ಯುಗಾದಿ - ಹೊಸ ಚೇತನದ ಹೋರಾಟದ ಹಾದಿ

ಮತ್ತೆ ಬಂದಿದೆ ಉಗಾದಿ
ಹೊಸ ಸಂವತ್ಸರದ ಉಗಮದೊಂದಿಗೆ
ಬಳಲಿ ಬೆಂಡಾಗಿ, ನಲುಗಿ ನಡುಗಿರುವ
ಜೀವಸಂಕುಲಕ್ಕೆ ತಂದಿದೆ ಸಂದೇಶವ
ಹೊಸತನದಿ, ಹೊಸ ಚೇತನದಿ
ನಡೆಯಲಿ ಈ ಸಂವತ್ಸರದ ಆದಿ

ಉಗಾದಿಯ ಸಂದೇಶ ಅರಿತವ
ಬರಡಾದ ನೆಲವ ಹೊಸ ಬೇಸಾಯದಿ
ಹದಮಾಡ ಹೊರಟಿರುವ
ಹದಮಾಡಿದ ಭೂಮಿಗೆ ಅಮೃತ ಸಿಂಚನವಾಗಿ
ನೆಂದ ನೆಲದಲಿ ಬೀಜ ಬಿತ್ತಿ
ಸೃಷ್ಟಿ ಕಾರ್ಯಕ್ಕೆ ತನ್ನ ಪುರುಷ ಪ್ರಯತ್ನ ನೆಡಸಿರುವ

ಕಾಲಗರ್ಭದಲ್ಲೇನಡಗಿದೆಯೋ ?
ಯುಗ ಯುಗಾಂತರದೀ ಪುರುಷ ಪ್ರಯತ್ನಕ್ಕೆ
ಬಸಿರಾದದೆಷ್ಟೋ ? ಹಸಿರಾದದೆಷ್ಟೋ ?
ಬದುಕಿನ ಈ ಹೋರಾಟದ ಹಾದಿಯಲಿ
ಬೇಸತ್ತಿರುವ ಜೀವಸಂಕುಲಕ್ಕೆ
ಹೊಸತನದ ಸಂದೇಶವ , ಹೊಸಚೇತನವ
ಯುಗಯುಗಗಳಿಂದ ಮತ್ತೆ ಮತ್ತೆ ತಂದಿದೆ ಈ ಉಗಾದಿ ... ಯುಗಾದಿ...